ರಾಣೆಬೆನ್ನೂರಿನಲ್ಲಿ ಕಮಲ ಅರಳಿಸಿದ ಬಳಿಕ ಏನಂತಿದ್ದಾರೆ ಅರುಣಕುಮಾರ್...? - Bypoll Reslut Haveri BJP candidate Arunakumar reaction
ಹಾವೇರಿ: ತಮ್ಮ ಜಯವನ್ನು ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅರ್ಪಿಸುವುದಾಗಿ ರಾಣೆಬೆನ್ನೂರು ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ತಿಳಿಸಿದ್ದಾರೆ. ಹಾವೇರಿಯ ದೇವಗಿರಿ ಸಮೀಪದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾತನಾಡಿದ ಅವರು, ಗೆಲುವಿಗೆ ಶ್ರಮಿಸಿದ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯನ್ನು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವ ಚಿಂತನೆ ನಡೆಸಿರುವುದಾಗಿ ತಿಳಿಸಿದರು.