ಪೋಷಕರೇ ಈ ವಿಡಿಯೋ ನೋಡಿ! ಮಕ್ಕಳು ರಸ್ತೆ ದಾಟುವಾಗ ಎಚ್ಚರವಹಿಸಿ - ಬಾಲಕಿಗೆ ಡಿಕ್ಕಿ ಹೊಡೆದ ಬೈಕ್
ಬಾಲಕಿಗೆ ಶರವೇಗದಲ್ಲಿ ಡಿಕ್ಕಿ ಹೊಡೆದ ಬೈಕ್ ಬಾಲಕಿಯನ್ನು ದೂರ ಎಳೆದೊಯ್ದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ನಿಸರ್ಗ ಲೇಔಟ್ ಬಳಿ ನಡೆದಿದೆ. ಬೈಕ್ ಡಿಕ್ಕಿ ಹೊಡೆದಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.