ಉಪ ಚುನಾವಣಾ ಸಮರ: ರಾಣೆಬೆನ್ನೂರು ಅಭ್ಯರ್ಥಿ ಪರ ಸಿಎಂ, ಗೃಹ ಸಚಿವರಿಂದ ಭರ್ಜರಿ ಪ್ರಚಾರ - Karnataka political development
ರಾಣೆಬೆನ್ನೂರಿನ ಉಪ ಸಮರ ರಂಗೇರುತ್ತಿದೆ. ತಂತಮ್ಮ ಅಭ್ಯರ್ಥಿಗಳನ್ನು ಹೇಗಾದ್ರೂ ಗೆಲ್ಲಿಸಿಕೊಳ್ಳಲೇಬೇಕು ಅಂತ ಪಕ್ಷಗಳ ಪ್ರಮುಖ ನಾಯಕರು ಸರ್ಕಸ್ ಮಾಡ್ತಿದಾರೆ. ಇದು ತಮ್ಮ ಕೊನೆಯ ಚುನಾವಣೆ ಅಂತ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಶತಾಯಗತಾಯ ಗೆಲ್ಬೇಕು ಅಂತಿದ್ರೆ, ಸಿಎಂ ಯಡಿಯೂರಪ್ಪ ಅವರು ಕೋಳಿವಾಡ ವಿರುದ್ಧ ಸಮಾವೇಶ ನಡೆಸಿ ಕಮಲ ಪಾಳಯಕ್ಕೆ ಶಕ್ತಿ ತುಂಬಿದ್ದಾರೆ.