ಕರ್ನಾಟಕ

karnataka

ETV Bharat / videos

ಉಪ ಚುನಾವಣೆ: ಪೊಲೀಸ್ ಬಿಗಿ ಭದ್ರತೆಯಲ್ಲಿ ಮತದಾನ ಆರಂಭ - ಉಪ ಚುನಾವಣೆ ಲೆಟೆಸ್ಟ್ ನ್ಯೂಸ್​

By

Published : Dec 5, 2019, 8:35 AM IST

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 07 ರಿಂದ ಸಂಜೆ 6 ಗಂಟೆವರೆಗೆ ಮತದಾನ ವ್ಯವಸ್ಥೆ ಕಲ್ಪಿಸಲಾಗಿದ್ದು, ಕ್ಷೇತ್ರದಾದ್ಯಂತ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳನ್ನ ಸಿದ್ದಪಡಿಸಲಾಗಿದ್ದು, 1020 ಸಿಬ್ಬಂದಿಯನ್ನ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. 1344 ರಕ್ಷಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರ ಎರಡು ತಾಲೂಕುಗಳನ್ನ ಒಳಗೊಂಡಿದ್ದು ಒಟ್ಟು 1,72,547ಮತದಾರರಿದ್ದಾರೆ. 87899 ಗಂಡು ಹಾಗೂ 84666 ಮಹಿಳಾ ಮತ್ತು ಒಂದು ಇತರ ಮತದಾರರಿದ್ದಾರೆ. ಈ ಕ್ಷೇತ್ರದ ಕುರಿತಾದ ಇನ್ನು ಹೆಚ್ಚಿನ ಮಾಹಿತಿ ನಮ್ಮ ಪ್ರತಿನಿಧಿ ನೀಡಲಿದ್ದಾರೆ.

ABOUT THE AUTHOR

...view details