ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಹೆಚ್ಚಿನ ಭದ್ರತೆ - ಉಪಚುನಾವಣೆ ಫಲಿತಾಂಶ
ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಮಲ್ಲೆಶ್ವರಂ ಬಿಜೆಪಿ ಕಚೇರಿ ಬಳಿ ಫಲಿತಾಂಶ ಬಂದ ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬರುವ ಕಾರಣ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಫಲಿತಾಂಶ ವಿಕ್ಷಣೆ ಮಾಡಲು ದೊಡ್ಡ ಎಲ್ಇಡಿ ವಾಲ್ ಹಾಕಲಾಗಿದೆ. ಪೊಲೀಸರು ಹಾಗೂ ಸಾರ್ವಜನಿಕರು ಬಿಜೆಪಿ ಕಚೇರಿಯಲ್ಲಿ ಎಲ್ಇಡಿ ಪರದೆ ಮೇಲೆ ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ಹಾಗೂ ಹೊಯ್ಸಳ ಸಿಬ್ಬಂದಿ ಇದ್ದಾರೆ.