ಸಾರಿಗೆ ನೌಕರರ ಮುಷ್ಕರಕ್ಕೆ ತೆರೆ: ಮೈಸೂರಿನಲ್ಲಿ ಬಸ್ ಸಂಚಾರ ಆರಂಭ - Bus Traffic start in Mysore
ಮೈಸೂರು: ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಮುಷ್ಕರಕ್ಕೆ ತೆರೆಬಿದ್ದಿದೆ. ಕಳೆದ 4 ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಮುಕ್ತಾಯವಾದ ಹಿನ್ನೆಲೆ, ಮೈಸೂರು ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾಗಿದೆ. ಮುಷ್ಕರಕ್ಕೆ ತೆರೆ ಬಿದ್ದಿದ್ದರಿಂದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು, ಬಸ್ ನಿಲ್ದಾಣಕ್ಕೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿ ಪ್ರಯಾಣಿಕರ ಕಷ್ಟ ಆಲಿಸಿದ್ದಾರೆ.