ಗ್ರೀನ್ ಝೋನ್ ಜಿಲ್ಲೆ ಕೊಡಗಿನಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭ, ಪ್ರಯಾಣಿಕರ ಕೊರತೆ - bus
ಸುಮಾರು ಒಂದೂವರೆ ತಿಂಗಳ ನಂತರ ಗ್ರೀನ್ ಝೋನ್ ವ್ಯಾಪ್ತಿಯ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಬಸ್‌ಗಳ ಸಂಚಾರ ಆರಂಭಗೊಂಡಿದೆ. ಆದರೆ, ಮಡಿಕೇರಿಯ ಬಸ್ ನಿಲ್ದಾಣ ಪ್ರಯಾಣಿಕರೇ ಇಲ್ಲದೆ ಭಣಗುಡುತ್ತಿದೆ. ಬೆರಳೆಣಿಕೆಯಷ್ಟು ಜನ ಮಾತ್ರ ಬಸ್‌ಗಳಲ್ಲಿ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸುತ್ತಿದ್ದಾರೆ. ಜಿಲ್ಲಾಡಳಿತದ ನಿರ್ದೇಶನದಂತೆ ತಾಲೂಕು ಕೇಂದ್ರಗಳಾದ ಸೋಮವಾರಪೇಟೆ, ವಿರಾಜಪೇಟೆ, ಭಾಗಮಂಡಲಕ್ಕೆ ಹಾಗೆಯೇ ಕುಶಾಲನಗರಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. ಸಂಸ್ಥೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ಬಸ್‌ಗಳನ್ನು ಬಿಟ್ಟಿದ್ದರೂ ಜಿಲ್ಲೆಯ ಜನ್ರು ಸಾರಿಗೆ ಕಡೆ ಅಷ್ಟು ಒಲವನ್ನು ವ್ಯಕ್ತಪಡಿಸುತ್ತಿಲ್ಲ.