ನೀರಿನ ರಭಸಕ್ಕೆ ಕೊಚ್ಚಿ ಹೋದ ನಾಲ್ವರಿದ್ದ ಎತ್ತಿನಬಂಡಿ.. ವಿಡಿಯೋ ನೋಡಿ - ನೀರಿನ ರಭಸಕ್ಕೆ ಎತ್ತುಗಳು ಗಾಬರಿ
ರಾಯಚೂರು: ಹಳ್ಳವೊಂದರಲ್ಲಿ ಎತ್ತಿನಬಂಡಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ರೈತ ತಿಮ್ಮೂತಿ ಎಂಬಾತ ಸೇರಿದಂತೆ ನಾಲ್ವರು ಹೊಲಕ್ಕೆ ಎತ್ತಿನಬಂಡಿಯಲ್ಲಿ ಗೊಬ್ಬರ ತೆಗೆದುಕೊಂಡು ಹಳ್ಳವನ್ನ ದಾಟುತ್ತಿದ್ದ ವೇಳೆ, ನೀರಿನ ರಭಸಕ್ಕೆ ಎತ್ತುಗಳು ಗಾಬರಿಗೊಂಡು ಬಂಡಿಯ ಕೊಳ್ಳು ಮುರಿದಿದೆ. ಪರಿಣಾಮ ಬಂಡಿಯ ಸಮೇತ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಸ್ಥಳೀಯರು ಕೂಡಲೇ ರಕ್ಷಣೆ ಮಾಡಿದ್ದಾರೆ.
Last Updated : Oct 1, 2020, 8:48 PM IST