ಜಲ್ಲಿಕಟ್ಟು ಸ್ಪರ್ಧೆ; ಓಟ ಕಿತ್ತ ಹೋರಿ ಹಗ್ಗಕ್ಕೆ ಸಿಕ್ಕ ವ್ಯಕ್ತಿಯನ್ನೂ ಎಳೆದೊಯ್ತು.. ವಿಡಿಯೋ - ತಮಿಳುನಾಡು ಸಿಂಗಾರಪಲ್ಲಿ ಜಲ್ಲಿಕಟ್ಟು
ತಮಿಳುನಾಡಿನ ಸಿಂಗಾರಪಲ್ಲಿಯಲ್ಲಿ ಜರುಗುತ್ತಿದ್ದ ಜಲ್ಲಿಕಟ್ಟು ಆಚರಣೆ ವೇಳೆ ಹೋರಿಯೊಂದು ವ್ಯಕ್ತಿಯನ್ನು ಎಳೆದೊಯ್ದ ಘಟನೆ ನಡೆದಿದೆ. ಗೂಳಿಗೆ ಕಟ್ಟಿದ್ದ ಹಗ್ಗಕ್ಕೆ ವ್ಯಕ್ತಿಯ ಕಾಲು ಸಿಲುಕಿದ ಪರಿಣಾಮ ಈ ಘಟನೆ ಜರುಗಿದೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯನ್ನು ಅಡ್ಡಗಟ್ಟಿದವರಿಗೆ ಬಹುಮಾನ ಇರುತ್ತದೆ. ಸಿಂಗಾರ ಮಾಡಿ ಹಗ್ಗ ಕಟ್ಟಿದ್ದ ಹೋರಿ ಹಿಡಿಯಲು ಹೋದ ವ್ಯಕ್ತಿಯ ಕಾಲು ಆಯತಪ್ಪಿ ಸಿಕ್ಕಿಹಾಕಿಕೊಂಡಿತ್ತು. ಹಗ್ಗದ ಜೊತೆ ವ್ಯಕ್ತಿಯನ್ನು ಎತ್ತು ಎಳೆದುಕೊಂಡು ಹೋಗಿದೆ. ಘಟನೆಯಿಂದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ. ಕಳೆದ ಒಂದು ತಿಂಗಳಲ್ಲಿ ನಾಲ್ಕೈದು ಅವಘಡಗಳು ಸಂಭವಿಸಿದ್ದರೂ ಹೋರಿ ಓಟದ ಸ್ಪರ್ದೆಗೆ ಎಲ್ಲಿಲ್ಲದ ಜನಪ್ರಿಯತೆ ಇದೆ.