ಕರ್ನಾಟಕ

karnataka

ETV Bharat / videos

ಉಡುಪಿ: ಬಹುಮಹಡಿ ಕಟ್ಟಡದ ಅರ್ಧ ಭಾಗ ಕುಸಿತ... ತಪ್ಪಿದ ದುರಂತ - udupi building collapse news

By

Published : Sep 19, 2020, 7:00 AM IST

ಸುಮಾರು 50 ವರ್ಷ ಹಳೆಯದಾದ ಬಹುಮಹಡಿ ಕಟ್ಟಡವೊಂದರ ಅರ್ಧ ಭಾಗ ಕುಸಿದು ಬಿದ್ದಿರುವ ಘಟನೆ ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಎಂಬಲ್ಲಿ ನಡೆದಿದೆ. ಉಡುಪಿಯ ಉದ್ಯಮಿ ಸಾಯಿರಾಜ್ ಹೆಗ್ಡೆ ಎಂಬುವವರಿಗೆ ಸೇರಿದ ರಾಯಲ್ ಮಹಲ್‌ ಬಹುಮಹಡಿ ಕಟ್ಟಡದ ಅರ್ಧ ಭಾಗ ನಿನ್ನೆ ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಕುಸಿತಗೊಂಡಿದ್ದು, ಕಟ್ಟಡದ ಒಳಗಡೆ ಇದ್ದವರು ಹೊರಗಡೆ ಓಡಿ ಬಂದ ಕಾರಣ ದೊಡ್ಡ ದುರಂತ ತಪ್ಪಿದೆ. ಕಟ್ಟಡದಲ್ಲಿ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಬೇಕರಿ ಸೇರಿದಂತೆ ಐದಾರು ಅಂಗಡಿಗಳಿದ್ದವು. ಅಗ್ನಿಶಾಮಕ ದಳದವರು ಬಿದ್ದ ಕಟ್ಟಡದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದು, ಪೂರ್ತಿ ಕಟ್ಟಡವನ್ನು ಕೂಡಲೇ ತೆರವುಗೊಳಿಸವಂತೆ ನಗರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ABOUT THE AUTHOR

...view details