ಹುಬ್ಬಳ್ಳಿಯಲ್ಲಿ ಇದ್ದಕ್ಕಿದ್ದಂತೆ ನೆಲಕ್ಕುರುಳಿದ ಕಟ್ಟಡ... ಆಮೇಲೇನಾಯ್ತು? - Building collapse news
ನೋಡ ನೋಡುತ್ತಲೇ ಲದ್ವಾ ಅನ್ನೋರಿಗೆ ಸೇರಿದ ಹಳೆಯ ಕಟ್ಟಡವೊಂದು ನೆಲ ಕಚ್ಚಿದ ಘಟನೆ ಹುಬ್ಬಳ್ಳಿ ನಗರದ ಕಮರಿಪೇಟೆ ಸರ್ಕಲ್ ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ನೂರಾರು ಹಳೇ ಕಟ್ಟಡಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದರೂ, ಮಾಲೀಕರು ಈವರೆಗೂ ಅವುಗಳನ್ನ ತೆರವು ಗೊಳಿಸಿರಲಿಲ್ಲ. ಆದ್ರೆ ಇಂದು ಇದ್ದಕ್ಕಿದಂತೆ ಕಟ್ಟಡ ನೆಲಕುರುಳಿದ್ದು, ಅನಾಹುತ ಸಂಭವಿಸಿದ್ದರೆ ಯಾರು ಜವಾಬ್ದಾರಿ ಅಂತ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಕಮರಿಪೇಟೆ ಸರ್ಕಲ್ ಸದಾ ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿದ್ದು, ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಕೂಡಲೇ ಹಳೇ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.