ಕರ್ನಾಟಕ

karnataka

ETV Bharat / videos

ಗೌಳಿ ಸಮುದಾಯದವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಎಮ್ಮೆ ಓಡಿಸುವ ಸ್ಪರ್ಧೆ - Buffalo running competition in Haveri

By

Published : Nov 16, 2020, 9:25 PM IST

ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದಲ್ಲಿ ಗೌಳಿ ಸಮುದಾಯದವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಎಮ್ಮೆಗಳನ್ನ ಓಡಿಸುವ ಸ್ಪರ್ಧೆ ನಡೆಸಲಾಯಿತು. ಎಮ್ಮೆಗಳಿಗೆ ಮಾಡಲಾಗಿದ್ದ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಅಲಂಕಾರಗೊಂಡ ಎಮ್ಮೆ ತನ್ನ ಮಾಲೀಕನ ಹಿಂದೆ ಓಡುತ್ತಿದ್ದರೆ, ಹಿಂದಿನಿಂದ ಮಕ್ಕಳ ಕೂಗಾಟ ಜೋರಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಮ್ಮೆಗಳ ಓಟ ನೋಡಲು ಜನರು ಅಲ್ಲಲ್ಲಿ ನೆರೆದಿದ್ದು, ಕೇಕೆ ಹಾಕುವ ಮೂಲಕ ಗೌಳಿಗರ ಖುಷಿಯನ್ನ ಇಮ್ಮಡಿಗೊಳಿಸುತ್ತಿದ್ದರು.

ABOUT THE AUTHOR

...view details