ಡಿಕೆಶಿ ಆದಷ್ಟು ಬೇಗ ಬಂಧ ಮುಕ್ತರಾಗಲೆಂದು ಸಿಎಂ ಯಡಿಯೂರಪ್ಪ ಪ್ರಾರ್ಥನೆ! - Dkshivkumar
ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ತನ್ನನ್ನು ಬಂಧಿಸಿರುವುದಕ್ಕೆ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸಿಎಂ ಬಿಎಸ್ವೈ ಅವರನ್ನು ಕೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಡಿಕೆಶಿಗೆ ಈ ರೀತಿ ಆಗಿರುವುದಕ್ಕೆ ನಾನೇನು ಸಂತಸ ಪಡುತ್ತಿಲ್ಲ. ಈ ಎಲ್ಲದರಿಂದ ಅವರು ಆದಷ್ಟು ಬೇಗ ಹೊರ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ ಎಂದರು.