ಸ್ಮಾರ್ಟ್ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ - ಬಿಆರ್ಟಿಎಸ್ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್
ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ಬಸ್ ಸಂಚಾರಕ್ಕೆ ಅಳವಡಿಸಿಕೊಂಡ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಹಾಗೂ ವಿವಿಧ ಮಾದರಿಯ ಸ್ಮಾರ್ಟ್ ಕಾರ್ಡ್ಗಳಿಗೆ ಮತ್ತು ಯೋಜನೆಯ ಮೊಬೈಲ್ ಆ್ಯಪ್ಗೆ ಸಚಿವ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ನಗರದ ಹೆಚ್ಡಿಬಿಆರ್ಟಿಎಸ್ ನಿಯಂತ್ರಣಾ ಕೊಠಡಿಯಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಸಿ.ಎಂ.ನಿಂಬಣ್ಣವರ, ಮೋಹನ ಲಿಂಬಿಕಾಯಿ, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ ಇದ್ದರು.