ವಿಡಿಯೋ: ತುಂಬಿ ಹರಿಯುತ್ತಿರುವ ನದಿಯಲ್ಲೇ ಈಜಿ ದಡ ಸೇರಿದ ಸಹೋದರರು - Vijayapura flood updates
ವಿಜಯಪುರ: ತುಂಬಿ ಹರಿಯುತ್ತಿರುವ ನದಿಯಲ್ಲೇ ಈಜಿ ಇಬ್ಬರು ಜೀವ ಉಳಿಸಿಕೊಂಡ ಘಟನೆ ಜಿಲ್ಲೆ ಧೂಳಖೇಡ ಗ್ರಾಮದಲ್ಲಿ ನಡೆದಿದೆ. ರೇವಣಸಿದ್ದ ಹಾಗೂ ಮಹಾದೇವಪ್ಪ ಎಂಬ ಸಹೋದರರು ಹರಿಯುತ್ತಿರುವ ನದಿ ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಭೀಮಾ ನದಿ ಪ್ರವಾಹದಿಂದಾಗಿ ಜಲಾವೃತವಾದ ಮನೆಯಲ್ಲಿ ಉಳಿದಿದ್ದ ರೇವಣಸಿದ್ದ ಹಾಗೂ ಮಹಾದೇವಪ್ಪ ನೀರು ಅಪಾಯದ ಮಟ್ಟ ಮೀರಿದ ಹಿನ್ನೆಲೆ ಈಜಿ ದಡ ಸೇರಿದ್ದಾರೆ.