ಹಾಡ ಹಗಲೇ ಕಾರಿನ ಗಾಜು ಒಡೆದು ಕಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ - Bangalore
ಹಾಡಹಗಲೇ ಕಾರಿನ ಗಾಜು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಗರದ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ. ಗೋಪಾಲ್ ಎಂಬುವರಿಗೆ ಸೇರಿದ್ದ ಕಾರಿನಲ್ಲಿ ಕ್ಯಾಮೆರಾ ಬ್ಯಾಗ್ ಕಂಡ ಮೂವರು ಖದೀಮರು ಕಾರಿನ ಗಾಜು ಒಡೆದಿದ್ದಾರೆ. ಬಳಿಕ ಖಾಲಿ ಬ್ಯಾಗ್ ಕಂಡು ಸ್ಥಳದಿಂದ ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.