ಅಮಾವಾಸ್ಯೆ ಎಫೆಕ್ಟ್: ಇಂದು ಗಜಪಡೆ ತಾಲೀಮಿಗೆ ಬ್ರೇಕ್ - ಗಜಪಡೆ ಕ್ಯಾಪ್ಟನ್ ಅಭಿಮನ್ಯು
ಅಮಾವಾಸ್ಯೆ ಹಿನ್ನೆಲೆ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಾಲೀಮಿಗೆ ಬ್ರೇಕ್ ನೀಡಲಾಗಿದೆ. ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳ ತಾಲೀಮಿಗೆ ವಿರಾಮ ನೀಡಿ, ಅವುಗಳಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಲಾಯಿತು. ನಾಳೆ ಅರಮನೆಯಲ್ಲಿ ಅತ್ಯಂತ ಸರಳವಾಗಿ ನವರಾತ್ರಿ ಉತ್ಸವ ಆರಂಭವಾಗುತ್ತಿರುವುದರಿಂದ ಪಟ್ಟದ ಆನೆ, ಕುದುರೆ, ಹಸುಗಳಿಗೆ ಕೂಡ ವಿಶ್ರಾಂತಿ ನೀಡಲಾಗುತ್ತದೆ.