ಬ್ರೇಕ್ ಫೇಲಾಗಿ ಅಡ್ಡಾದಿಡ್ಡಿ ಬಂದ ಲಾರಿ: ಪ್ರಾಣಾಪಾಯದಿಂದ ಪಾರಾದ ಟೋಲ್ ಸಿಬ್ಬಂದಿ- ವಿಡಿಯೋ - ಲಾರಿ ಬ್ರೇಕ್ ಫೇಲ್
ತುಮಕೂರು: ಕಾಂಕ್ರೀಟ್ ಮಿಕ್ಸ್ ಮಾಡುವ ಲಾರಿಯೊಂದು ಬ್ರೇಕ್ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಲಿಸಿದ ಘಟನೆ ಕೊರಟಗೆರೆ ತಾಲೂಕಿನ ದಾಸರಹಳ್ಳಿ ಟೋಲ್ ಗೇಟ್ ಬಳಿ ನಡೆದಿದೆ. ಟೋಲ್ ಬಳಿ ಕುಳಿತಿದ್ದ ಸಿಬ್ಬಂದಿ ಕೂದಲೆಳೆ ಅಂತರದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಧುಗಿರಿ ಕಡೆಯಿಂದ ತುಮಕೂರಿಗೆ ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಟೋಲ್ ಬಳಿ ಇರುವ ಹಂಪ್ ದಾಟುತ್ತಿದ್ದಂತೆ ಇನ್ನಷ್ಟು ವೇಗ ಪಡೆದುಕೊಂಡಿದೆ. ಅಲ್ಲಿಯೇ ಹಾಕಲಾಗಿದ್ದ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದ ನಂತರ ಚಾಲಕ ಜಾಗರೂಕತೆಯಿಂದ ಲಾರಿಯನ್ನು ನಿಲ್ಲಿಸಿದ್ದಾನೆ.