ಮೂಢ್ಯತೆಗೆ ಸಡ್ಡು: ಗ್ರಹಣ ಸಂದರ್ಭದಲ್ಲೇ ಸೇಬು, ಕಲ್ಲು ಸಕ್ಕರೆ ಸೇವಿಸಿದ ಸ್ವಾಮೀಜಿ - state Science parishat
ಹಾವೇರಿ: ಗ್ರಹಣದ ವೇಳೆ ಹಲವು ಮೂಢನಂಬಿಕೆಗಳನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಾವೇರಿಯ ಸ್ವಾಮೀಜಿಗಳು ಕಂಕಣ ಸೂರ್ಯ ಗ್ರಹಣದ ವೇಳೆ ಸೇಬುಹಣ್ಣು, ಕಲ್ಲು ಸಕ್ಕರೆ ಸೇವಿಸುವ ಮೂಲಕ ಮೂಢನಂಬಿಕೆಗೆ ಸಡ್ಡು ಹೊಡೆದಿದ್ದಾರೆ. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಮತ್ತು ರಾಜ್ಯ ವಿಜ್ಞಾನ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು.