ಕರ್ನಾಟಕ

karnataka

ETV Bharat / videos

ಎರಡು ದಿನದ ಹಿಂದೆ ಕಾಣೆಯಾಗಿದ್ದ ಯುವಕ, ಶವವಾಗಿ ಪತ್ತೆ - Kolar crime news

By

Published : Sep 28, 2019, 11:36 AM IST

ಕೋಲಾರ: ಎರಡು ದಿನದ ಹಿಂದೆ ಕಾಣೆಯಾಗಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದ‌ ಕಾರಂಜಿಕಟ್ಟೆ ಬಡಾವಣೆ 11ನೇ ಕ್ರಾಸ್ ಬಳಿ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ನಾಗಲಾಪುರ ಗ್ರಾಮದ ನವೀನ್ (28) ಎಂಬಾತ ಶವವಾಗಿ ಪತ್ತೆಯಾಗಿದೆ. ಮೃತ ನವೀನ್ ಮನೆ ಬಿಟ್ಟು ಎರಡು ದಿನವಾಗಿತ್ತು. ರವಿ ಎಂಬುವರ ಮನೆಯ ಗ್ರಿಲ್‌ನಲ್ಲಿ‌ ಶವ ನೇತಾಡುತ್ತಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ನೇಣುಹಾಕಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ‌ ಗಲ್​ಪೇಟೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು.

ABOUT THE AUTHOR

...view details