ಪುತ್ತೂರಿನಲ್ಲಿ 'ಬಾಟಲಿ ಭೂತ' ಶೈಕ್ಷಣಿಕ ನಾಟಕ ಪ್ರದರ್ಶನ: ವಿಡಿಯೋ - Mangalore Drama News
ಪುತ್ತೂರು(ದಕ್ಷಿಣ ಕನ್ನಡ): ಪುತ್ತೂರಿನಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ತಾಲೂಕು ಘಟಕದ ಸಹಯೋಗದಲ್ಲಿ ಪಡಿ ಮಂಗಳೂರು ಮತ್ತು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಕಾರದೊಂದಿಗೆ ಸುಸ್ಥಿರ ಸಮಾಜದಲ್ಲಿ ಮಕ್ಕಳು - ತಿಮಿರದಾಚೆಗೆ ಬಾ ಎಂಬ ಪರಿಕಲ್ಪನೆಯೊಂದಿಗೆ 'ಬಾಟಲಿ ಭೂತ' ಶೈಕ್ಷಣಿಕ ನಾಟಕ ಪ್ರದರ್ಶನ ನಡೆಯಿತು. ಕಾವು ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಉದ್ಯಮಿ ಎನ್.ಕರುಣಾಕರ ರೈ ಅವರು ಕಲಾ ಜಾಥಾ ಉದ್ಘಾಟಿಸಿದರು. ಬಳಿಕ ನಾಟಕ ಪ್ರದರ್ಶನಗೊಂಡಿತ್ತು. ಶಾಸಕ ಸಂಜೀವ ಮಠಂದೂರು ಸೇರಿದಂತೆ ಅತಿಥಿಗಳು ಪೂರ್ಣ ನಾಟಕವನ್ನು ನೋಡಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.