ಬಟಾನಿಕಲ್ ಗಾರ್ಡನ್ ನೋಡಲು ಊಟಿಗೆ ಹೋಗಬೇಕೆಂದಿಲ್ಲ, ಇನ್ಮುಂದೆ ಮೈಸೂರಿಗೂ ಬರಬಹುದು! - ಮೈಸೂರಿನ ಶ್ರೀರಾಂಪುರದ ಲಿಂಗಾಂಬುದಿ ಕೆರೆ
ಮೈಸೂರು: ಇನ್ಮುಂದೆ ಬಟಾನಿಕಲ್ ಗಾರ್ಡನ್ ನೋಡಬೇಕು ಅಂದ್ರೆ ಊಟಿಗೆ ಹೋಗಬೇಕೆಂದಿಲ್ಲ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅಂತಹ ಸೌಂದರ್ಯ ಸವಿಯಬಹುದು. ಮೈಸೂರಿನ ಶ್ರೀರಾಂಪುರದ ಲಿಂಗಾಂಬುದಿ ಕೆರೆ ಅಂಚಿನಲ್ಲಿ ಸಿದ್ದವಾಗಿದೆ ಸಸ್ಯಕಾಶಿ. ಹಸಿರು ಹೊದ್ದಿರುವ ಉದ್ಯಾನವನ ಪ್ರವಾಸಿತಾಣಕ್ಕೂ ಸೈ, ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸೈ ಕೆಲವೇ ದಿನಗಳಲ್ಲಿ ಪ್ರವಾಸಿಗರ ಸೆಂಟರ್ ಆಫ್ ಅಟ್ರಾಕ್ಷನ್ ಆಗಲಿದೆ. ಶ್ರೀರಾಂಪುರದ ಲಿಂಗಾಂಬುದಿ ಕೆರೆ ಅಂಚಿನಲ್ಲಿ 15 ಎಕರೆ ಪ್ರದೇಶ ಇದೀಗ ಹಚ್ಚ ಹಸಿರಿನ ವಲಯ. 5 ವರ್ಷಗಳ ಹಿಂದೆ ನಿರ್ಜನ ಪ್ರದೇಶದಂತಿದ್ದ ಈ ಜಾಗ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ತೋಟಗಾರಿಕೆ ಇಲಾಖೆಯ ಪರಿಶ್ರಮಕ್ಕೆ 15 ಎಕರೆ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.