ಅಂತರ ಕಾಯ್ದುಕೊಳ್ಳಲು ರಂಗೋಲಿ ಚೌಕಟ್ಟು: ಕೊರೊನಾ ಹರಡದಂತೆ ಪೌರಾಯುಕ್ತ ಬೋರಣ್ಣವರ ಜಾಗೃತಿ - ಕೊರೊನಾ ವೈರಸ್ ಹರಡದಂತೆ ಅರಿವು ಮೂಡಿಸಿದ ಪೌರಾಯುಕ್ತ ಬೋರಣ್ಣವರ
ಚಿಕ್ಕೋಡಿ: ಕೊರೊನಾ ಸೋಂಕು ತಡೆಯುವ ಸಲುವಾಗಿ ಅಂಗಡಿಗಳ ಮುಂದೆ ಪೌರ ಕಾರ್ಮಿಕರು ರಂಗೋಲಿ ಚೌಕಟ್ಟು ನಿರ್ಮಾಣ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣ ಹಾಗೂ ಸುತ್ತಮುತ್ತ ಕೊರೊನಾ ವೈರಸ್ ಹರಡದಂತೆ ಪ್ರತಿನಿತ್ಯ ಬೇಕಾಗುವ ಕಾಯಿ ಪಲ್ಯ, ಔಷಧಿ, ರೇಷನ್ ಅಂಗಡಿ, ಪೇಟ್ರೊಲ್, ಡಿಸೇಲ್, ಹಾಲು, ಹಣ್ಣುಹಂಪಲು ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಲು ಹೋದಾಗ ಜನರು ಸುಮಾರು 1 ಮೀಟರ್ನಷ್ಟು ಅಂತರ ಕಾಯ್ದುಕೊಳ್ಳಬೇಕು. ಮುಖಕ್ಕೆ ಮಾಸ್ಕ್, ಕೈ ಚೀಲ ಧರಿಸಿ ಖರೀದಿ ಮಾಡಬೇಕು. ಅಂಗಡಿ ಮಾಲೀಕರು ಸಹ ಕೈಚೀಲ, ಮಾಸ್ಕ್, ಸ್ಯಾನಿಟೈಸರ್ ದ್ರವ ಬಳಸಿಕೊಂಡು ಅಂತರದಿಂದ ವ್ಯಾಪಾರ ವಹಿವಾಟ ಮಾಡಬೇಕು. ಹೆಚ್ಚು ಜನರನ್ನು ಸೇರಿಸದೆ ಕಟ್ಟುನಿಟ್ಟಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ನಿಪ್ಪಾಣಿ ಪೌರಾಯುಕ್ತ ಮಹಾವೀರ ಬೋರಣ್ಣವರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.