ಅಡಕತ್ತರಿಯಲ್ಲಿ ಕನ್ನಡ ವಿದ್ಯಾರ್ಥಿಗಳು: ಇದು ತಮಿಳುನಾಡಿನ ಕನ್ನಡ ಶಾಲೆಗಳ ಕಥೆ - ವ್ಯಥೆ - ಹಳದಿ ಕೆಂಪು ಬಾವುಟ ರಾರಾಜನೆ
ಇನ್ನೇನು ನಾಳೆ ಕನ್ನಡ ರಾಜ್ಯೋತ್ಸವ ಕರುನಾಡಿನಲ್ಲಿ ಹಳದಿ ಕೆಂಪು ಬಾವುಟ ರಾರಾಜನೆ. ಜನಪದ ಕಲಾ ಪ್ರಕಾರಗಳದ್ದೇ ಕಾರುಬಾರು. ಆದರೆ, ರಾಜ್ಯದ ಗಡಿಯಾಚೆಗೆ ಕನ್ನಡದ ಕಂದಮ್ಮಗಳು ಕನ್ನಡ ಕಲಿತು ಉಸಿರುಗಟ್ಟುವ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಇಂತಹ ಹೊತ್ತಲ್ಲಿ, ತಮಿಳುನಾಡಿನ ಕನ್ನಡ ಶಾಲೆಗಳು ಕೊನೆಯುಸಿರೆಳೆಯುವ ಸ್ಥಿತಿಗೆ ತಲುಪಿವೆ.