ಗಡಿಯಲ್ಲಿ ಮೊಳಗುತ್ತಿದೆ ಕನ್ನಡ ಡಿಂಡಿಮ...ಆದರೂ ಇಲ್ಲಿನ ಮಕ್ಕಳಿಗಿಲ್ಲ ಯಾವುದೇ ಸೌಲಭ್ಯ..! - ಕೃಷ್ಣಾ ಗ್ರಾಮದಲ್ಲಿ ಜಿಲ್ಲಾ ಪರಿಷತ್ ಪ್ರೌಢಶಾಲೆ
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಶಾಲೆ ಮುಚ್ಚುತ್ತಿರುವ ಸನ್ನಿವೇಶಗಳು ನಮ್ಮ ಕಣ್ಣಮುಂದೆ ನಡೆಯುತ್ತಲೇ ಇವೆ. ಆದರೆ, ಪರರಾಜ್ಯದ ವಿದ್ಯಾರ್ಥಿಗಳು ಕನ್ನಡ ಶಾಲೆಯಲ್ಲಿ ಓದಲು ಆಸಕ್ತಿ ಬೆಳೆಸಿಕೊಂಡು ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗಡಿಭಾಗದ ಕನ್ನಡ ಶಾಲೆಗಳು ಮಾಯವಾಗುವ ಸಂದಿಗ್ಧ ಪರಿಸ್ಥಿತಿಗೆ ತಲುಪಿವೆ.