ಉತ್ತರಕನ್ನಡದ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ: ಪ್ರವಾಸಿಗರ ಸೆಳೆಯಲು ಬಂದಿದೆ ಶಿಖರ ಕ್ರೂಸ್
ಕಾರವಾರ: ನಿಸರ್ಗ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಜಿಲ್ಲೆ ಉತ್ತರಕನ್ನಡ. ಇಲ್ಲಿನ ಕಾಡು, ದ್ವೀಪ, ಕರಾವಳಿ ಭಾಗಗಳಲ್ಲಿ ಸಮಯ ಕಳೆಯಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇದೀಗ ಜಿಲ್ಲೆಯ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ಕಾರವಾರದ ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸಲು ಕೇರಳ ಮಾದರಿಯ ಕ್ರೂಸ್ ರೆಡಿಯಾಗಿದೆ.