ಪ್ರಯಾಣಿಕರಿಗೆ ತೊಂದರೆಯಾಗಿದ್ದಕ್ಕೆ ಕ್ಷಮೆ ಇರಲಿ: ಬಿಎಂಟಿಸಿ ಸಿಬ್ಬಂದಿ - bangalore latest news
ಬೆಂಗಳೂರು: ಇಂದು ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ಪ್ರಯಾಣಿಕರಿಗೆ ಬಸ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಅತಿ ಹೆಚ್ಚಿನ ಸಿಲಿಕಾನ್ ಸಿಟಿ ಮಂದಿ ಬಿಎಂಟಿಸಿ ಬಸ್ಗೆ ಅವಲಂಬಿತರಾಗಿದ್ದಾರೆ. ಹೋರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕ್ಷಮೆ ಕೋರುತ್ತಿದ್ದೇವೆಂದು ಬಿಎಂಟಿಸಿ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ನಮ್ಮ ಬೇಡಿಕೆ ಈಡೇರಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸದ್ಯದ ವಾಸ್ತವ ಚಿತ್ರಣವನ್ನು ನಮ್ಮ ಪ್ರತಿನಿಧಿ ಭವ್ಯಾ ಶಿಬರೂರು ವಿವರಿಸಿದ್ದಾರೆ.