ಆರಂಭವಾದ ರಕ್ತವಿದಳನಾ ಘಟಕ: ಬಡರೋಗಿಗಳಿಗೆ ಸಂಜೀವಿನಿಯಾದ ಆಸ್ಪತ್ರೆ - ರಕ್ತವಿದಳನಾ ಘಟಕ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಮೃದ್ಧ ರಕ್ತ ಭಂಡಾರ ಇದೆ. ರಕ್ತದಾನಿಗಳ ಸಂಖ್ಯೆ ಸಹ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಈವರೆಗೆ ರಕ್ತವನ್ನ ವಿಂಗಡಣೆ ಮಾಡುವ ವಿದಳನಾ ಘಟಕ ಇರಲಿಲ್ಲ. ಇದರಿಂದಾಗಿ ದೂರದ ಊರುಗಳಿಂದ ಬರುವ ರೋಗಿಗಳು ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹುಬ್ಬಳ್ಳಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ರಕ್ತವಿದಳನಾ ಘಟಕ ಆರಂಭವಾಗಿದೆ. ಜೊತೆಗೆ ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಸಹ ಒದಗಿಸಲಾಗಿದೆ. ಈ ಮೂಲಕ ಬಡರೋಗಿಗಳಿಗೆ ಹಾವೇರಿ ಜಿಲ್ಲಾಸ್ಪತ್ರೆ ಸಂಜೀವಿನಿಯಾಗಿದೆ.