ಸಾಹಸ ಸಿಂಹನ ಜನ್ಮದಿನಕ್ಕೆ ಅಭಿಮಾನಿಗಳಿಂದ ಶುಭಾಶಯ: ರಕ್ತದಾನ ಶಿಬಿರ - ವಿಷ್ಣು ಸೇನಾ ಸಮಿತಿ
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ವಿಷ್ಣು ಸೇನಾ ಸಮಿತಿ ಸದಸ್ಯರು ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ನಟ ವಿಷ್ಣುವರ್ಧನ ಅವರ 69ನೇ ಜನ್ಮದಿನ ಆಚರಿಸಿದರು. ಜಿಲ್ಲಾಸ್ಪತ್ರೆ ಸರ್ಜನ್ ನಾರಾಯಣಸ್ವಾಮಿ ಹಾಗೂ ಗಣ್ಯರು ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಭಿಮಾನಿಗಳು ರಕ್ತದಾನ ಮಾಡಿದರು. ನಗರದ ಹೊರ ವಲಯದಲ್ಲಿನ ಅಂತರಗಂಗೆ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಅನ್ನದಾನ, ಸಸಿ ನೆಡುವ ಹಾಗೂ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು.