ಕರ್ನಾಟಕ

karnataka

ETV Bharat / videos

40 ವರ್ಷದಿಂದ ಕಣ್ಣು ಕಾಣದಿದ್ದರೂ ಮತಗಟ್ಟೆಗೆ ಬಂದು ಮತದಾನ - ಗ್ರಾಮ ಪಂಚಾಯಿತಿ ಚುನಾವಣೆ ವಿಜಯಪುರ ಜಿಲ್ಲೆಯಲ್ಲಿ ಮಂದಗತಿ ಮತದಾನ

By

Published : Dec 22, 2020, 11:37 AM IST

ವಿಜಯಪುರ ಜಿಲ್ಲೆಯ ಎಂಟು ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 80 ವರ್ಷದ ಅಂಧ ವೃದ್ಧನೊಬ್ಬ ವೀಲ್‌ಚೇರ್‌ನಲ್ಲಿ ಮಗನ‌ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ‌ಐನಾಪುರ ತಾಂಡಾದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ವೀಲ್ ಚೇರ್‌ನಲ್ಲಿ ಬಂದಾಗ ಮತಗಟ್ಟೆ ಪ್ರವೇಶಿಸಲು ತೊಂದರೆ ಆಯಿತು. ತಕ್ಷಣ ಸ್ಥಳೀಯ ಯುವಕರು ಆಗಮಿಸಿ ವೀಲ್‌ಚೇರ್ ತಳ್ಳಿ ಮತಗಟ್ಟೆಗೆ ಕರೆದುಕೊಂಡು ಹೋದರು. ಈ ವೇಳೆ ಅಂಧ ವೃದ್ಧ ಮಾನಸಿಂಗ ನಾಯಕ ಕೈಗೆ ಶಾಹಿ ಹಾಕಿದರೆ ಆತನ ಮಗ ಮತ ಚಲಾಯಿಸಿದನು. ಈ ವೇಳೆ ಮಾತನಾಡಿದ ಮಾನಸಿಂಗ್, ತನಗೆ 80 ವರ್ಷ ವಯಸ್ಸಾಗಿದೆ. ಕಳೆದ 40 ವರ್ಷದಿಂದ ನನಗೆ ಕಣ್ಣು ಕಾಣುವುದಿಲ್ಲ. ಮಕ್ಕಳು ಸರಿಯಾಗಿ ನೋಡುವುದಿಲ್ಲ, ಆದರೂ ಮತದಾನದ ಉತ್ಸಾಹ ಕುಗ್ಗಿಲ್ಲ ಎಂದು ಸಂತಸ ಹಂಚಿಕೊಂಡರು.

ABOUT THE AUTHOR

...view details