ಮರವೇರಿ ಕುಳಿತು ಮಳೆಯಲ್ಲಿ ನೆನೆದು ಮೈ ಕೊಡವಿದ ಕರಿ ಚಿರತೆ... ವಿಡಿಯೋ ವೈರಲ್ - ಬ್ಲಾಕ್ ಪ್ಯಾಂಥರ್
ಮೈಸೂರು: ಮಳೆ ಆರಂಭವಾಗುತ್ತಿದ್ದಂತೆ ಅರಣ್ಯ ಪ್ರದೇಶಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿ ಕೇಂದ್ರದ ವ್ಯಾಪ್ತಿಯಲ್ಲಿ ಬ್ಲಾಕ್ ಪ್ಯಾಂಥರ್ವೊಂದು ಮಳೆಯಲ್ಲಿ ನೆನೆದು, ಮರವೇರಿ ಕುಳಿತು ಮೈಕೊಡವಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯವನ್ನು ವೈಲ್ಡ್ ಲೈಫ್ ಛಾಯಾಗ್ರಹಕ ಮಿಥುನ್ ತಮ್ಮ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.