ಸಿಬಿಐಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಯಶಸ್ಸು: ಡಿ.ಕೆ. ಶಿವಕುಮಾರ್ - KPCC President DK Shivakumara News
ಹೊಸಪೇಟೆ: ಸಿಬಿಐ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಯವರು ಮೊದಲಿಂದ ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಅದರಿಂದ ಯಶಸ್ಸು ಕಂಡಿದ್ದಾರೆ ಎಂದರು. ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆ ಪ್ರವಾಸ ಮಾಡಲಾಗುತ್ತಿದೆ. ಹೊಸಪೇಟೆ ಕಾರ್ಯಕರ್ತರ ಸಭೆ ಮುಗಿಸಿಕೊಂಡು, ಮಸ್ಕಿ ಕ್ಷೇತ್ರಕ್ಕೆ ತೆರಳುತ್ತೇನೆ. ಇದಾದ ಬಳಿಕ ಬಸವಕಲ್ಯಾಣದಲ್ಲಿ ಕಾರ್ಯಕ್ರಮವಿದೆ. ಮುಂದೆ ಗ್ರಾಮ ಪಂಚಾಯತ್ ಚುನಾವಣೆ ಬರಲಿದ್ದು, ಅದರ ಸಿದ್ಧತೆಗಾಗಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಡಿಕೆಶಿ ಹೇಳಿದ್ರು.
Last Updated : Nov 22, 2020, 2:09 PM IST