ಉಪಚುನಾವಣೆ ಬಳಿಕ ಕಾಂಗ್ರೆಸ್ ಅಖಾಡಗಳಲ್ಲಿ ಬಿಜೆಪಿ ದರ್ಬಾರ್ - ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್
ಕಳೆದೊಂದು ತಿಂಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಯಲ್ಲಾಪುರ ಕ್ಷೇತ್ರದ ಉಪಕದನ ಕೊನೆಗೂ ಬಿಜೆಪಿ ಗೆಲುವಿನೊಂದಿಗೆ ತೆರೆ ಬಿದ್ದಿದೆ. ಸಮ್ಮಿಶ್ರ ಸರ್ಕಾರದಿಂದ ಬಂಡಾಯವೆದ್ದ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಭೀಮಣ್ಣ ಅವರನ್ನು 31 ಸಾವಿರ ಮತಗಳ ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಸ್ಥಿತ್ವವೇ ಅಲುಗಾಡಿದೆ.