ಸಿಎಎ ಬೆಂಬಲಿಸಿ ಬಿಜೆಪಿ ಯುವಮೋರ್ಚಾದಿಂದ ಪಂಜಿನ ಮೆರವಣಿಗೆ - ಪಂಜಿನ ಮೆರವಣಿಗೆ ಸುದ್ದಿ
ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಬೆಂಬಲಿಸಿ ಬಿಜೆಪಿ ಯುವಮೋರ್ಚದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ನಂಜರಾಜ ಬಹದ್ದೂರ್ ಛತ್ರದಿಂದ ಆರಂಭಗೊಂಡ ಪಂಜಿನ ಮೆರವಣಿಗೆಗೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಶಿವರಾಂ ಪೇಟೆ ರಸ್ತೆ ಮೂಲಕ ಡಿ.ದೇವರಾಜ ಅರಸು ರಸ್ತೆ ತೆರಳಿ, ಅಲ್ಲಿಂದ ಮತ್ತೆ ನಂಜರಾಜ ಬಹದ್ದೂರ್ ಛತ್ರಕ್ಕೆ ವಾಪಸ್ ಬಂದಿತು. ಸಿಎಎ ದೇಶದಾದ್ಯಂತ ಜಾರಿಯಾಗುವುದರಿಂದ ದೇಶದಲ್ಲಿ ವಾಸಿಸುವ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆದರೆ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ತಪ್ಪು ಸಂದೇಶ ನೀಡುತ್ತಿವೆ. ಇದರ ಬಗ್ಗೆ ದೇಶದ ಜನರು ಎಚ್ಚರಗೊಳ್ಳಬೇಕು ಎಂದು ಘೋಷಣೆ ಕೂಗಿದರು.