ಸೇಬು ಹಣ್ಣಿನ ಮಾಲೆಗೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು... ಕೆಲ ಕ್ಷಣಗಳಲ್ಲೇ ಹಾರ ಹರೋ ಹರ - ಸೇಬು ಹಣ್ಣಿಗಾಗಿ ಬಿಜೆಪಿ ಕಾರ್ಯಕರ್ತರು ರಾಣಿಬೆನ್ನೂರಿನಲ್ಲಿ ಮುಗಿಬಿದ್ದರು
ಸೇಬು ಹಣ್ಣಿಗಾಗಿ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದ ಘಟನೆ ರಾಣೆಬೆನ್ನೂರು ಬಿಜೆಪಿ ಕಾರ್ಯಾಲಯದ ಮುಂದೆ ನಡೆದಿದೆ. ನೂತನ ಶಾಸಕ ಅರುಣಕುಮಾರ ಪೂಜಾರ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಹಾಕಲು ಗಂಗಾಮತಸ್ಥ ಸಮಾಜದ ವತಿಯಿಂದ ಸೇಬು ಹಣ್ಣಿನ ಮಾಲೆ ಮಾಡಿಸಲಾಗಿತ್ತು. ಕಾರ್ಯಕ್ರಮದ ನಂತರ ಕಾರ್ಯಾಲಯದ ಎದುರು ಕ್ರೇನ್ ಮೂಲಕ ಹಾರ ಹಾಕಲು ನಿಂತಾಗ ಕಾರ್ಯಕರ್ತರು ಮಾಲೆ ಮೇಲೆ ಮುಗಿಬಿದ್ದು ಸೇಬು ಕಿತ್ತುಕೊಂಡರು. ಸೇಬು ಹಣ್ಣು ತಿಂದ ಕಾರ್ಯಕರ್ತರು ಜೈ ರಾಜಾಹುಲಿ, ಜೈ ಬೊಮ್ಮಾಯಿ ಎಂದು ಘೋಷಣೆ ಕೂಗಿದರು.
TAGGED:
Ranebennur