ಸೋನಿಯಾ-ಕೇಜ್ರಿವಾಲ್ ಹೊಂದಾಣಿಕೆಯಿಂದ ದೆಹಲಿಯಲ್ಲಿ ಬಿಜೆಪಿ ಸೋತಿದೆ: ರವಿಕುಮಾರ್ - ಬೆಂಗಳೂರು ಲೆಟೆಸ್ಟ್ ನ್ಯೂಸ್
ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೊಂದಾಣಿಕೆ ರಾಜಕಾರಣದಿಂದಾಗಿ ಕೇಜ್ರಿವಾಲ್ ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೇ ರೀತಿ ನೀವು ಪಕ್ಷ ಕಟ್ಟಿದರೆ ಕಾಂಗ್ರೆಸ್ ದಿವಾಳಿ ಅಂಚಿಗೆ ಬಂದು ತಲುಪುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದ್ರು. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸರಿಯಾಗಿ ಸ್ಪರ್ಧಿಸಿದ್ರೆ ಬಿಜೆಪಿ ಗೆಲುವು ಸಾಧಿಸುತ್ತಿತ್ತು. ಆದ್ರೆ ಕಾಂಗ್ರೆಸ್ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದೆ ಎಂದು ಲೇವಡಿ ಮಾಡಿದರು.
Last Updated : Feb 13, 2020, 10:38 AM IST