![ETV Thumbnail video thumbnail](https://etvbharatimages.akamaized.net/etvbharat/prod-images/320-214-7695158-119-7695158-1592643347558.jpg)
ಹುತಾತ್ಮ ಯೋಧರಿಗೆ ಬಿಜೆಪಿಯಿಂದ ಶ್ರದ್ಧಾಂಜಲಿ - bagalkot mla veeranna charantimatt
ಚೀನಾ ದಾಳಿಗೆ ವೀರ ಮರಣ ಹೊಂದಿರುವ ಯೋಧರಿಗೆ ಬಿಜೆಪಿ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಬಸವೇಶ್ವರ ವೃತ್ತದ ಬಳಿ ಶಾಸಕ ವೀರಣ್ಣ ಚರಂತಿಂಟ ನೇತೃತ್ವದಲ್ಲಿ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕಾಲು ಕೆದರಿ ತಂಟೆ ಮಾಡುತ್ತಿರುವ ಚೀನಾ ಸೈನಿಕರಿಗೆ ನಮ್ಮ ದೇಶದ ಯೋಧರು ತಿರುಗೇಟು ನೀಡಿದ್ದಾರೆ. ಆದರೂ ಸಹ ಇಂತಹ ಸಮಯದಲ್ಲಿ ವೀರ ಮರಣ ಹೊಂದಿರುವ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು.