ರಾಜಕಾರಣದಲ್ಲಿ ಎಲ್ಲವೂ ಇರುತ್ತದೆ, ಸದ್ದು ಗದ್ದಲ ಇಲ್ಲದಿದ್ದರೆ ಜಾತ್ರೆ ಆಗಲ್ಲ: ಸಿ.ಟಿ.ರವಿ - CT Ravi latest news
ಚಿಕ್ಕಮಗಳೂರು: ಐಪಿಎಸ್ ಅಧಿಕಾರಿ ರೂಪ ಹಾಗೂ ಹೇಮಂತ್ ನಿಂಬಾಳ್ಕರ್ ನಡುವಿನ ಶೀತಲ ಸಮರ ಕುರಿತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅದರ ಬಗ್ಗೆ ವಿವರಕ್ಕೆ ಹೋಗಲ್ಲ. ಆದರೆ ಕೆಲ ಅಂಶಗಳನ್ನ ಎತ್ತಿರುವ ಬಗ್ಗೆ ತನಿಖೆಯಾಗುವ ಅವಶ್ಯಕತೆ ಇದೆ ಎಂದರು. ಬಸವರಾಜ್ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಎಲ್ಲವೂ ಇರುತ್ತದೆ. ಸದ್ದು ಗದ್ದಲ ಇಲ್ಲದಿದ್ದರೆ ಜಾತ್ರೆ ಆಗಲ್ಲ ಎಂದರು.