ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಬಿಜೆಪಿ ನಾಯಕರ ಕಿತ್ತಾಟ - leaders clamor at felicitation ceremony
ಕಲಬುರಗಿ: ಗ್ರಾ.ಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಬಿಜೆಪಿ ನಾಯಕರಿಬ್ಬರು ವೇದಿಕೆ ಮೇಲೆ ಪರಸ್ಪರ ಜಗಳವಾಡಿದ ಘಟನೆ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ. ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕ ನಾಯಕ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದ್ ಚೌಹಾಣ ಇವರಿಬ್ಬರು ಸಂಸದ ಉಮೇಶ್ ಜಾಧವ್ ಎದುರೇ ಪರಸ್ಪರ ವಾಕ್ಸಮರ ಮಾಡಿದ್ದಾರೆ. ನಾನು ಸೋಲಲು ಅರವಿಂದ ಚೌಹಾಣ ನೇರ ಹೊಣೆ ಎಂದು ವಾಲ್ಮಿಕ ನಾಯಕ ಕಿಡಿಕಾರಿದರು. ಇದಕ್ಕೆ ಕುಪಿತಗೊಂಡ ಚೌಹಾಣ ಮಾಜಿ ಶಾಸಕನ ಮೇಲೆರಗಿ ಬಂದಿದ್ದಾರೆ. ಈ ವೇಳೆ ಕಾರ್ಯಕರ್ತರು, ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.