ಕೊರೊನಾ ವೈರಸ್ ಜತೆಗಿನ ಬದುಕು ಅನಿವಾರ್ಯ.. ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ - ವಿಜಯಪುರ ಸುದ್ದಿ
ಮುದ್ದೇಬಿಹಾಳ (ವಿಜಯಪುರ) : ಕೊರೊನಾ ವೈರಸ್ ಬಗ್ಗೆ ತಿಳಿವಳಿಕೆಯ ಕೊರತೆಯಿಂದ ಜನರು ಭೀತಿಗೊಳಗಾಗಿದ್ದು, ಅದರ ಜೊತೆಗೆ ಬದುಕು ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಹೇಳಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗಗಳಂತೆ ಸಾಮಾನ್ಯ ವೈರಸ್‌ನಿಂದ ಹರಡುವಂತಹದ್ದಾಗಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರೊಂದಿಗೆ ನಿತ್ಯದ ದುಡಿಮೆಯ ಚಟುವಟಿಕೆಯಲ್ಲಿ ತೊಡಗಬಹುದು. ವಿನಾಕಾರಣ ವೈರಸ್ ಹಾಗೆ, ಹೀಗೆ ಎಂದು ಭಯ ಹುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆಯೊಂದಿಗೆ ಈ ರೋಗವನ್ನು ದೂರವಿಡಬಹುದಾಗಿದೆ ಎಂದರು.