ಹುಣಸೂರು ತಾಲೂಕನ್ನ 'ದೇವರಾಜ ಅರಸು' ಹೆಸರಲ್ಲಿ ಜಿಲ್ಲೆ ಮಾಡುವುದು ರಾಜಕೀಯವೇ: ವಿಶ್ವನಾಥ್ ಪ್ರಶ್ನೆ - ಡಿಸೆಂಬರ್ 5ರಂದು ಉಪಚುನಾವಣೆ
ಮೈಸೂರು: ಹುಣಸೂರು ತಾಲೂಕನ್ನು 'ದೇವರಾಜ್ ಅರಸು' ಜಿಲ್ಲೆಯನ್ನಾಗಿ ಮಾಡುವುದು ರಾಜಕೀಯವೇ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಜಿಲ್ಲೆಗಳನ್ನು ಮಾಡಿಲ್ಲವೇ? ಮೂರು ತಾಲೂಕುಗಳಿರುವ ರಾಮನಗರ ಜಿಲ್ಲೆಯಾಗಿಲ್ಲವೇ?. ಎರಡು ತಾಲೂಕಿಗೆ ಯಾದಗಿರಿ ಜಿಲ್ಲೆಯಾಗಿಲ್ಲವೇ?. ನಮ್ಮದು (ಮೈಸೂರು) ಆರು ತಾಲೂಕು ಒಳಗೊಂಡಿದೆ. 'ದೇವರಾಜ ಅರಸು' ಜಿಲ್ಲೆ ಮಾಡಲಿ ಎಂದು ಸರ್ಕಾರಕ್ಕೆ ಕೇಳಿದ್ದಿನಿ ಅದರಲ್ಲಿ ತಪ್ಪೇನಿದೆ ಎಂದರು.