ನಾಳೆಯೇ ಫಲಿತಾಂಶ: ಗೆಲುವಿನ ವಿಶ್ವಾಸದಲ್ಲಿರುವ ಕರಡಿ ಸಂಗಣ್ಣ ಹೇಳಿದ್ದೇನು? - undefined
ಕೊಪ್ಪಳ: ಈ ಬಾರಿ ಕುತೂಹಲ ಭಾರಿ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಸೇರಿದಂತೆ ಜನರು ರಿಸಲ್ಟ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತದಾನದ ಬಳಿಕ ಹಲವು ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಿಂದ ಅಭ್ಯರ್ಥಿಗಳು ಸೇರಿದಂತೆ ಜನರು ಸಹ ಸಾಕಷ್ಟು ಗೊಂದಲ ಹಾಗೂ ಕುತೂಹಲಕ್ಕೊಳಗಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಈಟಿವಿ ಭಾರತ ಪ್ರತಿನಿಧಿ ಮೌನೇಶ್ ಬಡಿಗೇರ್ ಅವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು, ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.