ಕಿಡಿಗೇಡಿಗಳು ವಿಷದ ಬೀಜ ಬಿತ್ತಲು ಬಂದು ವಿಫಲವಾಗಿದ್ದಾರೆ: ಬಿ.ಸಿ. ಪಾಟೀಲ್ - b.c.patil press meet in haveri
ಹಾವೇರಿ: ಕೆಲ ಕಿಡಿಗೇಡಿಗಳು ಬಣಕಾರ ಮತ್ತು ನಮ್ಮ ನಡುವೆ ವಿಷದ ಬೀಜ ಬಿತ್ತುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಹೇಳಿದ್ದಾರೆ. ನಾನು, ಬಣಕಾರ ಹಾಲು, ಸಕ್ಕರೆಯಂತೆ ಬೆರೆತು ಹೋಗಿದ್ದೇವೆ. ಇನ್ನೂ 48 ಗಂಟೆಗಳ ಕಾಲ ಕಾರ್ಯಕರ್ತರು ಉತ್ಸಾಹದಿಂದ ಬೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.