ಪ್ರಾಣಾಪಾಯದಲ್ಲಿದ್ದ ಬಿಳಿ ಗೂಬೆ ರಕ್ಷಿಸಿದ ಪಕ್ಷಿ ಪ್ರಿಯರು
ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಹತ್ತಿರದ ಕಟ್ಟಡವೊಂದರಲ್ಲಿ ಬಿಳಿ ಗೂಬೆಯೊಂದು ರೆಕ್ಕೆಗೆ ದಾರ ಸುತ್ತಿಕೊಂಡ ಪರಿಣಾಮ ಹಾರುವುದಕ್ಕಾಗದೇ, ವಿಲ ವಿಲ ಒದ್ದಾಡುತ್ತಿತ್ತು. ಇದನ್ನು ಕಂಡ ಪಕ್ಷಿ ಪ್ರೇಮಿ ಈರಪ್ಪ ನಾಯ್ಕರ್, ತಮ್ಮ ಸ್ನೇಹಿತರಾದ ಸಂದೀಪ್ ಮಹಾಲೆ ಹಾಗೂ ಡಾ.ಚಂದ್ರಶೇಖರ ಶಿರೂರ ಜೊತೆ ಸೇರಿಕೊಂಡು ಪಕ್ಷಿಯನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾಡಿನಲ್ಲಿ ಬಿಟ್ಟಿದ್ದಾರೆ.