ಕರ್ನಾಟಕ

karnataka

ETV Bharat / videos

ಸೇತುವೆ ದಾಟುವಾಗ ಕೊಚ್ಚಿ ಹೋದ ಬೈಕ್: ಕೂದಲೆಳೆ ಅಂತರದಲ್ಲಿ ಸವಾರರು ಪಾರು- ವಿಡಿಯೋ - ಕೊಚ್ಚಿ ಹೋದ ಬೈಕ್​

By

Published : Nov 19, 2021, 4:43 PM IST

ತುಮಕೂರು ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ಅವಾಂತರಗಳು ಹಾಗೂ ಸಾವು-ನೋವುಗಳು ಸಂಭವಿಸುತ್ತಿವೆ. ಕೊರಟಗೆರೆ ತಾಲೂಕಿನ ಮಲಪ್ಪನಹಳ್ಳಿ ದೊಡ್ಡ ಹಳ್ಳದಲ್ಲಿ ನದಿ ನೀರು ದಾಟುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕನ್ನು ರಕ್ಷಿಸಲು ಜನರು ಹರಸಾಹಸಪಟ್ಟ ಘಟನೆ ನಡೆದಿದೆ. ಬೈಕ್​​​ನಲ್ಲಿ ಹೋಗುತ್ತಿದ್ದ ಮೂವರು ನೀರಿನ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ. ನಂತರ ನೀರಿನ ಸೆಳೆತ ಹೆಚ್ಚಾಗಿದ್ದು, ಈ ಸಮಯದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್​​ ಉಳಿಸಿಕೊಳ್ಳಲು ಸಂಕಷ್ಟ ಅನುಭವಿಸಿದರು. ಆದರೆ ನೀರಿನ ರಭಸಕ್ಕೆ ಬೈಕ್​​ ಕೊಚ್ಚಿ ಹೋಯಿತು.

ABOUT THE AUTHOR

...view details