ರಾತ್ರಿ ವೇಳೆ ಮಾಸ್ಕ್ ಧರಿಸಿ ಕಳ್ಳರ ಕೈಚಳಕ : ಬುಲೆಟ್ ಬೈಕ್ ಎಗರಿಸಿ ಎಸ್ಕೇಪ್ - bengaluru latest crime news
ಬೆಂಗಳೂರು ನಗರದ ಖಾಸಗಿ ಅಪಾರ್ಟ್ಮೆಂಟ್ನ ಪಾರ್ಕಿಂಗ್ನಲ್ಲಿದ್ದ ಬುಲೆಟ್ ಬೈಕ್ ಅನ್ನು ಕಳ್ಳತನ ಮಾಡಿರುವ ಪ್ರಕರಣ ಹೆಣ್ಣೂರು ಠಾಣಾ ವ್ಯಾಪ್ತಿಯ ಎಚ್ಬಿಆರ್ ಲೇಔಟ್ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಖದೀಮರು ಬೈಕ್ ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಣ್ಣೂರು ಠಾಣಾ ಪೊಲೀಸರು ಬೈಕ್ ಕಳ್ಳರ ಹುಡುಕಾಟ ನಡೆಸಿದ್ದಾರೆ.