ಲಾಕ್ಡೌನ್ ಆದೇಶ ಉಲ್ಲಂಘನೆ ಮಾಡಿದವರಿಂದ ನಗರ ಸ್ವಚ್ಛ ಮಾಡಿಸಿದ ಅಧಿಕಾರಿಗಳು - Bike riders cleaned city
ಧಾರವಾಡ: ಲಾಕ್ಡೌನ್ ಆದೇಶ ಉಲ್ಲಂಘಿಸಿದವರಿಗೆ ಪೊಲೀಸರು ವಿಶೇಷ ಶಿಕ್ಷೆ ನೀಡಿದ್ದಾರೆ. ವಾಹನದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದವರ ಕೈಯಲ್ಲಿ ನಗರವನ್ನು ಸ್ವಚ್ಛಗೊಳಿಸುವಂತೆ ಮಾಡಿದ್ದಾರೆ. ಲಾಕ್ಡೌನ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆ ಆಳ್ನಾವರ ನಗರದಲ್ಲಿದ್ದ ಕಸವನ್ನು ಬೈಕ್ ಸವಾರರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ವಚ್ಛಗೊಳಿಸುವಂತೆ ಮಾಡಿಸಿದ್ದಾರೆ. ಅಳ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗದ್ದಿಗೌಡರ್ ಮತ್ತು ತಹಿಶೀಲ್ದಾರ್ ಅಮರೇಶ ಪಮ್ಮಾರ್ ಅವರಿಂದ ಈ ಕ್ರಮ ಕೈಗೊಳ್ಳಲಾಗಿದೆ.