ಕಾಫಿನಾಡಿನಲ್ಲಿ ಮೈನವಿರೇಳಿಸಿದ ಬೈಕ್ ರೇಸ್ - ವಿಡಿಯೋ - ಚಿಕ್ಕಮಳೂರಲ್ಲಿ ಬೈಕ್ ರೇಸ್
ಚಿಕ್ಕಮಗಳೂರು: ನಗರದ ಟೀಂ 65 ಯುವಕರ ತಂಡ ಆಯೋಜಿಸಿದ್ದ ಬೈಕ್ ರೇಸ್ ನೋಡುಗರ ಕಣ್ಮನ ಸೆಳೆಯಿತು. ಕಿರಿದಾದ ರಸ್ತೆಯಲ್ಲಿ ಸುಜುಕಿ, ಹೀರೋ, ಯಮಹಾ ಬೈಕ್‍ಗಳು ನಾ ಮುಂದು ತಾ ಮುಂದು ಅಂತ ಧೂಳೆಬ್ಬಿಸುತ್ತಾ ಸಾಗುತ್ತಿದ್ದರೆ, ಸುತ್ತಲು ನೆರೆದಿದ್ದ ಯುವ ಸಮೂಹದ ಮೈ ನವಿರೇಳಿಸುವಂತಿತ್ತು. ರೇಸಿಂಗ್ನಲ್ಲಿ ಕೇರಳ, ಚೆನ್ನೈ, ತಮಿಳುನಾಡಿನ ರೈಡರ್ಗಳಿಗೆ ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಮಂಗಳೂರು, ತುಮಕೂರಿನ ರೈಡ್ರ್ಗಳು ತೀವ್ರ ಪೈಪೋಟಿ ನೀಡಿದರು. ಒಟ್ಟು 90 ಕ್ಕೂ ಹೆಚ್ಚು ಬೈಕ್ಗಳ ಜಿದ್ದಾ ಜಿದ್ದಿ ನೋಡಿದ ಜನರು ಕೋವಿಡ್ ನಡುವೆಯೂ ಸಖತ್ ಎಂಜಾಯ್ ಮಾಡಿದರು.