ಸರ್ಕಾರಗಳ ನಿರ್ಲಕ್ಷ್ಯ ಧೋರಣೆ: ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಅಸಮಾಧಾನ. - bigg boss winner shashikumar
ಬೆಂಗಳೂರು: ರಾಜ್ಯ ರೈತ ಸಂಘಗಳ ಪ್ರತಿಭಟನೆ ಜೊತೆ ಕೈಜೋಡಿಸಿರುವ ಯುವ ರೈತ ಹಾಗೂ ಬಿಗ್ ಬಾಸ್ ವಿನ್ನರ್ ಶಶಿಕುಮಾರ್, ಕೇಂದ್ರ- ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬರ, ನೆರೆ ಉಂಟಾದರೂ ರಾಜ್ಯದ ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗುವುದಿಲ್ಲ. ಬೇರೆ ರಾಜ್ಯದ ರೈತರಿಗೆ ಹೋಲಿಸಿದ್ರೆ ರಾಜ್ಯದ ರೈತರನ್ನು ಕಡೆಗಣಿಸಲಾಗುತ್ತಿದೆ. ಇನ್ನಾದರೂ ರಾಜ್ಯ ಸರ್ಕಾರ ರೈತರು ಬೆಳೆದ ಬೆಳೆಯ ಸಂಪೂರ್ಣ ಲಾಭವನ್ನು ಕೇಂದ್ರಕ್ಕೆ ಬಿಟ್ಟುಕೊಡದೆ ರಾಜ್ಯದಲ್ಲೇ ಉಳಿಸಿಕೊಂಡು ರಾಜ್ಯದ ರೈತರಿಗೆ ನಷ್ಟವಾದಾಗ ತುಂಬಿಸಿಕೊಡಬೇಕು ಎಂದು ಆಗ್ರಹಿಸಿದರು. ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ರೈತರ ವಿರುದ್ಧ ಪೋಸ್ಟ್ಗಳು ಹರಿದಾಡುತ್ತಿದ್ದು, ಇದರ ವಿರುದ್ಧ ಕಿಡಿಕಾರಿದ ಶಶಿಕುಮಾರ್, ರೈತ ಒಂದು ಹೊತ್ತಿನ ಬೆಳೆ ಬೆಳೆಯದಿದ್ದರೆ ಮಣ್ಣು ತಿನ್ನುತ್ತೀರಾ? ಎಂದು ಕಿಡಿಕಾರಿದ್ದಾರೆ.