ರಾಜ್ಯದ ಹೈನೋದ್ಯಮ ನೆಲಕಚ್ಚುವ ಭೀತಿ :2 ತಿಂಗಳಲ್ಲಿ 2 ಲಕ್ಷ ಲೀ. ಹಾಲು ಸಂಗ್ರಹ ಕಡಿಮೆ - ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಆತಂಕ
ಹೈನೋದ್ಯಮ ಪ್ರೋತ್ಸಾಹಿಸಲು ಪಕ್ಕದ ರಾಜ್ಯಗಳಲ್ಲಿ ಮಾಡಲಾದ ಸರ್ಕಾರದ ಯೋಜನೆಯಿಂದ ನಮ್ಮ ರಾಜ್ಯದ ಹೈನೋದ್ಯಮವೇ ನೆಲಕಚ್ಚುವ ಸ್ಥಿತಿ ತಲುಪಿದೆ. ಕೇವಲ ಎರಡು ತಿಂಗಳಲ್ಲಿ ಕೋಲಾರ ಹಾಲು ಒಕ್ಕೂಟದಲ್ಲಿ ಸರಾಸರಿ ಎರಡು ಲಕ್ಷ ಲೀಟರ್ ಹಾಲು ಸಂಗ್ರಹ ಕಡಿಮೆಯಾಗುವ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಆತಂಕ ಎದುರಾಗಿದೆ.